ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ(೨೭ ಅಗಸ್ಟ್,೧೯೦೮-೨೫ ಫೆಬ್ರವರಿ,೨೦೦೧) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ(ದಾಂಡಿಗ). ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ೯೯.೯೪ರ ಸರಾಸರಿಯನ್ನು ಹೊಂದಿದ್ದಾರೆ, ಈ ಸರಾಸರಿಯು ಸಂಖ್ಯಾಶಾಸ್ತ್ರೀಯವಾಗಿ ಎಲ್ಲ ಪ್ರಮುಖ ಕ್ರೀಡೆಗಳಲ್ಲಿ ಕಂಡ ಅತ್ಯುನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ. ಬ್ರ್ಯಾಡ್ಮನ್ರವರು ಚಿಕ್ಕವರಾಗಿದ್ದಾಗ ಕ್ರಿಕೆಟ್ ಸ್ಟಂಪ್ ಮತ್ತು ಗೋಲ್ಫ್ ಚೆಂಡಿನೊಂದಿಗೆ ಅಭ್ಯಾಸ ಮಾಡುತ್ತಿದ್ದರೆಂಬುದು ಆಸ್ಟ್ರೇಲಿಯಾ ತುಂಬೆಲ್ಲಾ ಜನಜನಿತವಾಗಿರುವ ಕಥೆಯಾಗಿದೆ. ಕೇವಲ ೨ ವರ್ಷದಲ್ಲಿ ಇವರು ಗಲ್ಲಿ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ಟಿಗೆ ಬಡ್ತಿ ಪಡೆದಿದ್ದರು.ತಮ್ಮ ೨೨ನೇಯ ಹುಟ್ಟುಹಬ್ಬದ ಹೊತ್ತಿಗೆ ಇವರು ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಸ್ಥಾಪಿಸಿದ್ದರು, ಅದರಲ್ಲಿ ಕೆಲವು ಇನ್ನೂ ಅಳಿಯದೇ ನಿಂತಿವೆ. === ಸರಾಸರಿ ಒಂದು ವಿಶ್ಲೇಷಣೆ === ಬ್ರಾಡ್ಮನ್ರ ಬ್ಯಾಟಿಂಗ್ ಸರಾಸರಿಯಾದ ೯೯.೯೪ ಕ್ರಿಕೆಟ್ ಜಗತ್ತಿನ ಒಂದು ವಿಶಿಷ್ಟ ಸಂಖ್ಯೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಸಂಖ್ಯೆಯನ್ನು ಯಾವ ರೀತಿಯಿಂದ ಆದರಿಸುತ್ತಾರೆಂದರೆ, ಆಸ್ಟ್ರೇಲಿಯನ್ ಬ್ರಾಡಕಾಸ್ಟಿಂಗ್ ಕಂಪನಿಯ ಎಲ್ಲ ಸ್ಥಳಗಳ ಅಂಚೆ ಪೆಟ್ಟಿಗೆ ಸಂಖ್ಯೆ ೯೯೯೪. ೨೦ಕ್ಕೂ ಹೆಚ್ಚು ಟೆಸ್ಟ್ ಇನ್ನಿಂಗಗಳನ್ನಾಡಿರುವ ಯಾವ ಬ್ಯಾಟ್ಸಮನ್ನನೂ ಕೂಡ ೬೧ರ ಸರಾಸರಿಗಿಂತ ಮೇಲೆ ಹೋಗಿಲ್ಲ, ಈ ಹಿನ್ನೆಲೆಯಲ್ಲಿ ೯೯.೯೪ರ ಸರಾಸರಿ ಇನ್ನೂ ಮಹಾನ್ ಸಾಧನೆಯಾಗಿ ಕಾಣುತ್ತದೆ. ಟೆಸ್ಟ್ ಪಂದ್ಯಗಳನ್ನಾಡಿದ ಯಾವ ದಾಂಡಿಗನೂ ಬ್ರಾಡ್ಮನ್ ಗಳಿಸಿದ ರೀತಿಯಲ್ಲಿ ಶತಕಗಳನ್ನು ಬಾರಿಸಲಾಗಿಲ್ಲ, ಅವರು ಸರಾಸರಿ ತಮ್ಮ ಪ್ರತಿ ಮೂರನೇಯ ಇನ್ನಿಂಗ್ನಲ್ಲಿ ಶತಕವೊಂದನ್ನು ಬಾರಿಸುತ್ತಿದ್ದರು. ಅವರು ಒಟ್ಟು ೨೯ ಶತಕಗಳನ್ನು ಬಾರಿಸಿದ್ದಾರೆ. == ಸಂಖ್ಯಾ ವಿವರ == === ಟೆಸ್ಟ್ ಪಂದ್ಯಗಳಲ್ಲಿನ ಸಾಧನೆ === === ಎಲ್ಲ ಪಂದ್ಯಗಳಲ್ಲಿನ ಸಾಧನೆ === == ಉಲ್ಲೇಖಗಳು ==